ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನ ಸಂಸತ್, ಮೇಲುಕೋಟೆ

ಕ ಸಂವಿ. ಬೆಂಗಳೂರು, ಕರ್ನಾಟಕ ಸರ್ಕಾರ

wrappixel kit

ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನ ಸಂಸತ್, ಮೇಲುಕೋಟೆ

ಸಂಸ್ಥೆಯು ಬೆಳೆದು ಬಂದ ಹಿನ್ನೆಲೆ

                ಮೇಲುಕೋಟೆ ಕ್ಷೇತ್ರವು ಐತಿಹಾಸಿಕ, ಪೌರಾಣಿಕ ಹಾಗೂ ಸಾಂಪ್ರದಾಯಿಕ ದೃಷ್ಟಿಕೋನಗಳಿಂದ ಪ್ರಸಿದ್ಧಿಯಾಗಿರುವುದು ಸರ್ವವೇದ್ಯ. ಪುರಾಣ ಪ್ರಸಿದ್ಧವಾದ ಈ ಕ್ಷೇತ್ರವು ಜ್ಞಾನಮಂಟಪವೆನಿಸಿರುವುದು, ಇಲ್ಲಿ ಪಾರಂಪರಿಕವಾಗಿ ಹರಿದು ಬಂದಿರುವ ಅಧ್ಯಯನ, ಅಧ್ಯಾಪನಗಳ ಪದ್ಧತಿ ಮತ್ತು ಅನುಭವ ಸಾಮಗ್ರಿಗಳೇ ಅದಕ್ಕೆ ಕಾರಣವಾಗಿದೆ. ಈ ಜ್ಞಾನಮಂಟಪದಲ್ಲಿ ಪ್ರಾಚೀನ ಕಾಲದಿಂದಾರಂಭಿಸಿ, ಈವರೆವಿಗೂ, ಈ ಸತ್ಸಂಪ್ರದಾಯವೂ ಸಾಂಗವಾಗಿ ನೆರವೇರುತ್ತಾ ಬರುತ್ತಿದೆ. ಇವೆಲ್ಲವಕ್ಕೂ ಕಾರಣೀಭೂತರಾದವರು ಶ್ರೀರಾಮಾನುಜಾಚಾರ್ಯರು. ಆಚಾರ್ಯ ಶ್ರೀರಾಮಾನುಜರು ಸಾವಿರ ವರುಷಗಳ ಹಿಂದೆ ತಮ್ಮ ಜ್ಞಾನ ಮತ್ತು ತಪಃಶಕ್ತಿಗಳಿಂದ ಈ ಕ್ಷೇತ್ರವನ್ನು ಕನಸ್ಸಿನಲ್ಲಿ ಕಂಡು, ಭೌತಿಕವಾಗಿ ಇಲ್ಲಿಗೆ ಆಗಮಿಸಿ ಪುನರುಜ್ಜೀವನಗೊಳಿಸಿದ್ದಾರೆ. ಆ ತಪಸ್ಸಿನ ಶಕ್ತಿಯು ಇಂದಿಗೂ, ಈ ಕ್ಷೇತ್ರವನ್ನು ಸಂದರ್ಶಿಸುವ ಬಹುತೇಕರ ಅನುಭವಕ್ಕೆ ಬರುವ ವಿಷಯವಾಗಿದೆ.

                ಈ ಭಾವವನ್ನು ಮನಗಂಡಿದ್ದ ಅಂದಿನ ಮಾನ್ಯ ಉಪರಾಷ್ಟçಪತಿಗಳಾದ ಸನ್ಮಾನ್ಯ ಶ್ರೀ ಬಿ.ಡಿ. ಜತ್ತಿಯವರು ಭಗವದ್ರಾಮಾನುಜರ ತತ್ತ್ವ ಸಿದ್ಧಾಂತ, ದರ್ಶನ ಹಾಗೂ ಸಂಪ್ರದಾಯಗಳ ಅಮೂಲ್ಯ ವಿಚಾರಧಾರೆಯನ್ನು ಸಮಾಜಕ್ಕೆ ತಿಳಿಸುವ ನಿಟ್ಟಿನಲ್ಲಿ ಸಂಸ್ಥೆಯೊಂದು ಸ್ಥಾಪನೆಯಾಗಬೇಕೆಂದು ಆಶಿಸಿದ್ದರು. ಈ ಸದಾಶಯವನ್ನು ವಾಸ್ತವಗೊಳಿಸಲು, ಕರ್ನಾಟಕ ಸರ್ಕಾರವು ಪ್ರಾರಂಭಿಕ ಅನುದಾನವನ್ನೊದಗಿಸಿ, ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನ ಸಂಸತ್‌ನ್ನು (ಸಂಸ್ಕೃತ ಸಂಶೋಧನ ಸಂಸತ್) ಸ.ಆ.ಸಂಖ್ಯೆ : ಆರ್‌ಡಿ ೧೩೬ ಎಂಇಟಿ ೧೯೭೬, ದಿನಾಂಕ : ೧೫.೧೦.೧೯೭೬ರಲ್ಲಿ ಸ್ಥಾಪಿಸಿತು. ಅಂದಿನಿಂದಾರಂಭಿಸಿ, ಸರ್ಕಾರದ ಆದೇಶ, ಆಶಯ ಹಾಗೂ ಆರ್ಥಿಕ ಅನುದಾನಗಳೊಂದಿಗೆ ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನ ಸಂಸತ್ (ಸಂಸ್ಕೃತ ಸಂಶೋಧನ ಸಂಸತ್) ೪ ದಶಕಗಳ ಸಾರ್ಥಕ ಅಸ್ತಿತ್ವವನ್ನು ಪೂರೈಸಿ ೫ನೇ ದಶಕಕ್ಕೆ ಸಾಗಿದೆ. ಸಂಸ್ಥೆಯು ಸುಮಾರು ೧೦ ಸಾವಿರ ಅಮೂಲ್ಯ ತಾಳಪತ್ರಗಳ ಸಂಗ್ರಹಣೆ, ಸಂರಕ್ಷಣೆ ಮತ್ತು ಅಪ್ರಕಟಿತ ತಾಳಪತ್ರಗಳ ಪ್ರಕಟಣೆಗೆ ಪ್ರತ್ಯೇಕ ನೂತನ ಕಟ್ಟಡ ನಿರ್ಮಿಸಿ ಅಭಿವೃದ್ಧಿಯತ್ತಾ ಸಾಗಿದೆ. ಗ್ರಂಥಾಲಯದಲ್ಲಿ ಸುಮಾರು ೩೧೬೦೦ ಸಾವಿರ ಗ್ರಂಥಗಳ ಸಂರಕ್ಷಣೆ ಮತ್ತು ವಿಮರ್ಶಾತ್ಮಕ ಗ್ರಂಥಗಳ ಸಂಪಾದನೆ, ಸಂಶೋಧನೆ ಹಾಗೂ ಪ್ರಕಟಣೆ ಮುಂತಾದ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.

ಮತ್ತಷ್ಟು ಓದಿ

ಕಾರ್ಯಕ್ರಮಗಳು

ಸರ್ಕಾರದ ಆದೇಶಗಳು, ಸುತ್ತೋಲೆಗಳು & ಡೌನ್‌ಲೋಡ್‌ಗಳು

ಪ್ರಕಟಣಾ ಗ್ರಂಥಗಳು

×
ABOUT DULT ORGANISATIONAL STRUCTURE PROJECTS